"ಕೊಪ್ಪಳದ ನೀರ್ ಸಾಬ"

ಜನತೆಗೆ ಮೂಲಭೂತ ಅವಶ್ಯಕ ಕುಡಿಯುವ ನೀರಿನ ಸೇವೆ .. ಜನತೆ ಕೆ.ಎಂ.ಸಯ್ಯದ್ ರನ್ನು ಕರೆಯುವುದು "ಕೊಪ್ಪಳದ ನೀರ್ ಸಾಬ" ಎಂದು....ಪ್ರಥಮ ಬಾರಿಗೆ ಕೊಪ್ಪಳದ ಅಟೋಡ್ರೈವರ್ ಗಳಿಗೆ ಸಮವಸ್ತ್ರ ವಿತರಣೆ.... ಅವರಿಗಾಗಿ ಅಟೋ ಸ್ಟಾಂಡ್ ನಿರ್ಮಾಣ...ಯುವ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ವಿವಿದ ಆಟೋಟಗಳ ಸ್ಪರ್ಧೆಗಳ ಆಯೋಜನೆ ಮತ್ತು ಪ್ರಾಯೋಜಕತ್ವ.....ವಿವಿದ ಸಂಘ ಸಂಸ್ಥೆಗಳಿಗೆ ಧನಸಹಾಯ... ಬಡ ಮಹಿಳೆಯರಿಗೆ ಸೀರೆ ವಿತರಣೆ...

Sunday, April 28, 2013

ಕೊಪ್ಪಳದಲ್ಲಿ ಬದಲಾವಣೆಯ ಕಾಲ ಸನ್ನಿಹತವಾಗಿದೆ : ಮುಲ್ಲಾ




ಕೊಪ್ಪಳ,ಏ.೨೮: ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರ ಮತ್ತು ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ದಿಗಾಗಿ ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಮಾರು ಕೋಟಿ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಆ ಹಣ ಎಲ್ಲಿ ಹೋಯಿತು, ಯಾರ ಜೇಬಿಗೆ ಸೇರಿತು ಎಂಬುವುದೇ ತಿಳಿಯದಂತಾಗಿದೆ. ಆದರೆ ಅಭಿವೃದ್ದಿ ಮಾತ್ರ ಮರೆಚಿಕೆಯಾಗಿದಂತಾಗಿದೆ. ಅದನ್ನು ಈ ಭಾಗದ ಪವಿತ್ರ ಶ್ರೀ ಹುಲಿಗೆಮ್ಮ ದೇವಿಯೇ ನೋಡಿಕೊಳ್ಳಲಿ ಮತ್ತು ಅಂತವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದರ ಮೂಲಕ ತಪ್ಪಿತಸ್ಥರಿಗೆ ಶಿಕ್ಷಿಸಲಿ ಎಂದು ಕೆಜೆಪಿ ಪಕ್ಷದ ಯುವ ನಾಯಕ ವಾಗ್ಮಿ ಮೆಹಬೂಬ್ ಮುಲ್ಲಾ ಹನುಮಸಾಗರ ಅವರು ಹೇಳಿದರು.
ಅವರು ತಾಲೂಕಿನ ಇತಿಹಾಸ ಪ್ರಸಿದ್ಧ ಹುಲಗಿ ಗ್ರಾಮದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರ ಪರ ಏರ್ಪಡಿಸಿದ ಬಹಿರಂಗ ಮತಯಾಚನೆ ಸಮಾರಂಭದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಉಪಚುನಾವಣೆಯ ಮುನ್ನ ಮತ್ತು ನಂತರ ಬಿಡುಗಡೆಗೊಂಡ ಸರಕಾರದ ಅನುದಾನದಲ್ಲಿ ಬಹುತೇಕವಾಗಿ ಸದುಪಯೋಗವಾಗದೇ ದುರುಪಯೋಗವೇ ಜಾಸ್ತಿ ಎಂದು ಆರೋಪಿಸಿದ ಅವರು, ಈಗ ಕೊಪ್ಪಳದಲ್ಲಿ ಬದಲಾವಣೆಯ ಕಾಲ ಸನ್ನಿಹಿತವಾಗಿದೆ. ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಅಧಿಕಾರವಿಲ್ಲದೇ ಜನರ ಸೇವೆ ಮಾಡುತ್ತ ಬಂದಿರುವ ಕೆ.ಎಂ.ಸಯ್ಯದ್‌ರವರಿಗೆ ಈ ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ಇನ್ನು ಹೆಚ್ಚಿನ ರೀತಿಯಲ್ಲಿ ಜನರ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದ ಅವರು, ವಿಶ್ವ ಮಾನವ ಮಹಾ ಮಾನವತಾವಾದಿ ಬಸವಣ್ಣನವರ ಕನಸು ನನಸಾಗಿಸಲು ಯಡಿಯೂರಪ್ಪನವರಿಗೆ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಮತ್ತು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೆ.ಎಂ.ಸಯ್ಯದ್‌ರವರನ್ನು ಕೊಪ್ಪಳ ಕ್ಷೇತ್ರದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸಾಮಾಜಿಕ ನ್ಯಾಯ ಡಾ.ಬಿ.ಆರ್.ಅಂಬೇಡ್ಕರರವರ ತತ್ವ ಪಾಲಿಸುವುದರ ಜೊತೆಗೆ ಶ್ರಮಿಸಲು  ಯುವ ಶಕ್ತಿಗೆ ಅಧಿಕಾರ ನೀಡಬೇಕು ಎಂದರು. ನಮ್ಮ ಕೆಜೆಪಿ ಪಕ್ಷದ ಗುರುತು ತೆಂಗಿನಕಾಯಿ ಪೂಜೆಗೆ ಬಹಳ ಶ್ರೇಷ್ಠವಾಗಿದೆ ಮತದಾನವೆಂದರೆ ಅತ್ಯಂತ ಪವಿತ್ರವಾಗಿದ್ದು, ಅದು ಕನ್ಯಾದಾನಕ್ಕೆ ಸಮಾನ ಅದಕ್ಕಾಗಿ ಯೋಚಿಸಿ ಅರ್ಹ ವ್ಯಕ್ತಿಗೆ ಮತ ನೀಡಬೇಕು ಮತದಾನ ಮಾರಾಟಕಲ್ಲ. ಅದನ್ನು ಅರಿತುಕೊಂಡು ಮತದಾನ ಮಾಡಬೇಕು. ಕೊಪ್ಪಳದ ಜನರು ಬುದ್ದಿ ಜೀವಿಗಳು, ಚಾಣಾಕ್ಷತದಿಂದ ಈ ಬಾರಿ ಮತ ನೀಡಿ ಅರ್ಹ ವ್ಯಕ್ತಿಗೆ ಆಯ್ಕೆ ಮಾಡಲು ಮುಂದಾಗಬೇಕೆಂದು ಕೆಜೆಪಿ ಪಕ್ಷದ ಯುವ ನಾಯಕ ವಾಗ್ಮಿ ಮೆಹಬೂಬ್ ಮುಲ್ಲಾ ಹನುಮಸಾಗರ ಹೇಳಿದರು.
ಈ ಸಂದರ್ಭದಲ್ಲಿ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಮಾತನಾಡಿ, ಕೊಪ್ಪಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ತಮ್ಮನ್ನು ಬೆಂಬಲಿಸುವಂತೆ ಜನತೆಗೆ ಮನವಿ ಮಾಡಿಕೊಂಡರು. ಪಕ್ಷದ ತಾಲೂಕ ಅಧ್ಯಕ್ಷ ಪ್ರಫುಲ್ ಗೌಡ ಹುರಕಡ್ಲಿ, ಪ್ರಚಾರ ಸಮೀತಿ ಅಧ್ಯಕ್ಷ ನೇಮರಾಜ ಪಾಟೀಲ್, ಮುಖಂಡರಾದ ಈಶ್ವರ ಎನ್., ಶ್ಯಾಮೀದ್‌ಸಾಬ ಕಿಲ್ಲೇದಾರ, ಸಿ.ಎಸ್.ಡಂಬಳ, ಮಾರುತಿ ಮಾಗಳದ, ಮೆಹಬೂಬ ಬಹದ್ದೂರಬಂಡಿ, ಮಲ್ಲಿಕಾರ್ಜುನ ವದಗನಾಳ, ಬಸವರಾಜ ಬಳ್ಳಾರಿ ಅಳವಂಡಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. 

Friday, April 26, 2013

ಕೆಜೆಪಿಯಿಂದ ನಾಡಿನ ಸಮಗ್ರ ಅಭಿವೃದ್ದಿ ಸಾಧ್ಯ


ಕೊಪ್ಪಳ,ಏ.೨೫: ನಾಡಿನ ಸರ್ವಾಂಗೀಣ ಅಭಿವೃದ್ದಿಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷಕ್ಕೆ ಬೆಂಬಲಿಸಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿಕೊಡಬೇಕು. ಅಂದಾಗ ಮಾತ್ರ ನಾಡಿನ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ಪಕ್ಷದ ಯುವ ನಾಯಕ ಮೆಹಬೂಬ್ ಮುಲ್ಲಾ ಅಭಿಪ್ರಾಯ ಪಟ್ಟರು.
ಅವರು ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಏರ್ಪಡಿಸಿದ ಕೆಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ಬಹಿರಂಗ ಮತಯಾಚನೆ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತ, ಕೆ.ಎಂ. ಸಯ್ಯದ್ ರವರು ಕಳೆದ ೩-೪ ವರ್ಷಗಳಿಂದ ಕೊಪ್ಪಳದಲ್ಲಿ ತಮ್ಮದೇಯಾದ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿಕೊಂಡು ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡುತ್ತ ಜನಸಾಮಾನ್ಯರ ಪ್ರೀತಿ, ವಿಶ್ವಾಸಗಳಿಸುವಲ್ಲಿ ಯಶಸ್ವಿಯಾದ ಇವರು ಕೊಪ್ಪಳ ವಿಧಾನಸಭಾ ಚುನಾವಣೆ ೨೦೧೩ ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಾಕಣಕ್ಕೆ ಧುಮೂಕಿದ್ದು,  ಕೊಪ್ಪಳ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ  ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.
ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರು ಮಾತನಾಡುತ್ತ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಈ ಚುನಾವಣೆ ಸವಾಲಾಗಿ ಸ್ವೀಕರಿಸಲಾಗಿದ್ದು, ಚುನಾವಣೆ ಯುದ್ದವೀರರಿಗೆ ಹಬ್ಬವೇ ಹೊರತು ಭಯವಲ್ಲ ಎಂದ ಅವರು, ಸರ್ವರ ಸಹಕಾರದೊಂದಿಗೆ ಸ್ಪರ್ಧಿಸಿರುವ ಈ ಚುನಾವಣೆಯಲ್ಲಿ ಗೆಲ್ಲುವ ಧೃಢ ವಿಶ್ವಾಸವನ್ನು ವ್ಯಕ್ತಪಡಿಸಿದರು.  ಕೆಜೆಪಿ ಪಕ್ಷದ ಮುಖಂಡರಾದ ಪ್ರಫುಲ್‌ಗೌಡ ಹುರಕಡ್ಲಿ,  ಹಾಜಿ ಸಯ್ಯದ್ ಹಜರತ್ ಪಾಷಾ ಖಾದ್ರಿ, ನೇಮಿರಾಜ ಪಾಟೀಲ್, ಪರಸಪ್ಪ ರಾಠೋಡ್, ರೈತ ಸಂಘದ ಮುಖಂಡ ಹನುಮಂತಪ್ಪ ಕಲಿಕೇರಿ, ಯಮನೂರಪ್ಪ ಹಲಗೇರಿ, ದೇವಪ್ಪ ಮಾಗಳದ, ಶ್ಯಾಮೀದ್‌ಸಾಬ ಕಿಲ್ಲೇದಾರ, ಲಕ್ಷ್ಮಣ ಕವಲೂರು, ಪ್ರಭಾಕರ ಬಡಿಗೇರ, ಬಿ.ಕೆ.ಹಿರೇಮಠ ವಕೀಲರು ಹುಲಗಿ, ಈಶ್ವರ ಲಿಂಗಾಪುರ, ಸಿ.ಎಂ.ಡಂಬಳ, ಅಬ್ದುಲ್ ಅಜೀಜ್ ಮಾನ್ವಿಕರ್, ಎಂ.ಡಿ.ಆಸೀಫ್ ಕರ್ಕಿಹಳ್ಳಿ, ಮಾರುತಿ ಮಾಗಳದ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಮತಯಾಚನೆ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

Monday, April 22, 2013

ಕೆಜೆಪಿ ಪಕ್ಷದಿಂದ ನಾಡಿನ ಸಮಗ್ರ ಅಭಿವೃದ್ದಿ : ಸಯ್ಯದ್


ಕೊಪ್ಪಳ,ಏ.೧೫:ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಇದು ನಮ್ಮ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷದಿಂದ ಮಾತ್ರ ಸಾಧ್ಯವಾಗಿದ್ದು, ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲು ಮತ್ತು ಈ ನಾಡಿನ ಸಮಗ್ರ ಅಭಿವೃದ್ದಿಗೆ ಕೆಜೆಪಿಗೆ ಬೆಂಬಲಿಸಬೇಕೆಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿ ಮಟ್ಟದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಿಗೆ ಭೇಟಿ ಮಾಡಿ ಮನೆಮನೆಗೆ ತೇರಳಿ ಮತಯಾಚನೆ ನಡೆಸಿದ ಬಳಿಕ ಅಳವಂಡಿ ಗ್ರಾಮದಲ್ಲಿ ಏರ್ಪಡಿಸಿದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ನಾಡಿನ ಜನಸಾಮಾನ್ಯರಿಗೆ ತಂದಿರುವ ಯೋಜನೆಗಳನ್ನು ಈ ನಾಡಿನ ಸಾರ್ವಜನಿಕರು ಮರೆಯುವುದಿಲ್ಲ. ಅವರ ಜನಪರ ಕಾರ್ಯಕ್ರಮಗಳೇ ಈ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಹೇಳಿದರು. 
ಈ ಸಂದರ್ಭದಲ್ಲಿ ಮುಖಂಡ ನೇಮಿರಾಜ ಪಾಟೀಲ್, ಮಹೆಬೂಬ್ ಮುಲ್ಲಾ, ಶ್ಯಾಮೀದ್ ಸಾಬ ಕಿಲ್ಲೇದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು. 

Wednesday, April 17, 2013

ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ನಾಮಪತ್ರ ಸಲ್ಲಿಕೆ




ಸಹಸ್ರಾರು ಕಾರ್ಯಕರ್ತರೊಂದಿಗೆ ಭಾರಿ ಮೆರವಣಿಗೆ : ರೋಡ್ ಶೋದಲ್ಲಿ ಭಾರಿ ಜನಸಾಗರ : ಸಂಚಾರ ಸ್ಥಗಿತ
ಕೊಪ್ಪಳ,ಏ.೧೭: ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಕೆಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಇಲ್ಲಿನ ನೀರಸಾಬ ಎಂದೇ ಖ್ಯಾತಿ ಹೊಂದಿರುವ ಸಯ್ಯದ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟನ್ ಅಧ್ಯಕ್ಷ ಕೆ.ಎಂ.ಸಯ್ಯದ್‌ರವರು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರದಂದು ತಮ್ಮ ಉಮೇದುವಾರಿಕೆಯ ನಾಮಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು.

ಇದಕ್ಕೂ ಮುನ್ನ ನಗರದ ಸಿರಸಪ್ಪಯ್ಯನಮಠ ಆವರಣದಿಂದ ಜರುಗಿದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಭೌವ್ಯ ಮೆರವಣಿಗೆ ಆರಂಭಗೊಂಡು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಡಿಯಾರ ಕಂಬ, ಅಶೋಕ ಸರ್ಕಲ್ ಮೂಲಕ ತಹಶೀಲ್ ಕಛೇರಿಗೆ ತೇರಳಿದ ಮೆರವಣಿಗೆ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಳ್ಳುವುದರ ಮೂಲಕ ಕೆ.ಎಂ.ಸಯ್ಯದ್‌ರವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿನ ಮೆರವಣಿಗೆಯಲ್ಲಿ ಭಾರಿ ಜನಸಾಗರ ಪಾಲ್ಗೊಂಡಿತ್ತು. ಸ್ವಲ್ಪ ಕಾಲ ರಾಷ್ಟ್ರೀಯ ಹೆದ್ದಾರಿ-೬೩ ರಲ್ಲಿ ಸಂಚಾರ ಸ್ಥಗೀತಗೊಂಡಿತು. ಪೊಲೀಸರ ಸೂಕ್ತ ಬಂದೋಬಸ್ತ್‌ನಿಂದ ಸುಗಮ ಸಂಚಾರ ನಡೆಯಿತು.
ಕೆ.ಎಂ.ಸಯ್ಯದ್‌ರವರು ಕಳೆದ ೩-೪ ವರ್ಷಗಳಿಂದ ಕೊಪ್ಪಳದಲ್ಲಿ ತಮ್ಮದೇಯಾದ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿಕೊಂಡು ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡುತ್ತ ಜನಸಾಮಾನ್ಯರ ಪ್ರೀತಿ, ವಿಶ್ವಾಸಗಳಿಸುವಲ್ಲಿ ಯಶಸ್ವಿಯಾದ ಇವರು ಕೊಪ್ಪಳ ವಿಧಾನಸಭಾ ಚುನಾವಣೆ ೨೦೧೩ ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಾಕಣಕ್ಕೆ ಧುಮೂಕಿದ್ದು, ಇವರ ಇಂದು ಜರುಗಿದ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿನ ಭೌವ್ಯ ಮೆರವಣಿಗೆಯಲ್ಲಿ ಸರ್ವ ಜನಾಂಗದವರು ಭಾಗವಹಿಸುವುದರ ಮೂಲಕ ಅವರಿಗೆ ವ್ಯಾಪಕವಾಗಿ ಬೆಂಬಲ ವ್ಯಕ್ತಪಡಿಸುವಂತೆ ಕಂಡುಬರುತ್ತಿತ್ತು. 
ಈ ಮೆರವಣಿಗೆಯಲ್ಲಿ ಪಕ್ಷದ ಅಭ್ಯರ್ಥಿ ಕೆ.ಎಂ.ಸಯ್ಯದ್‌ರೊಂದಿಗೆ ಪಕ್ಷದ ಮುಖಂಡರಾದ ಪ್ರಫುಲ್‌ಗೌಡ ಹುರಕಡ್ಲಿ, ಹಾಜಿ ಸಯ್ಯದ್ ಹಜರತ್ ಪಾಷಾ ಖಾದ್ರಿ, ನೇಮಿರಾಜ ಪಾಟೀಲ್, ಪರಸಪ್ಪ ರಾಠೋಡ್, ರೈತ ಸಂಘದ ಮುಖಂಡ ಹನುಮಂತಪ್ಪ ಕಲಿಕೇರಿ, ಯಮನೂರಪ್ಪ ಹಲಗೇರಿ, ದೇವಪ್ಪ ಮಾಗಳದ, ಶ್ಯಾಮೀದ್‌ಸಾಬ ಕಿಲ್ಲೇದಾರ, ವಾಗ್ಮಿ ಯುವ ನಾಯಕ ಮೆಹಬೂಬ ಮುಲ್ಲಾ, ಲಕ್ಷ್ಮಣ ಕವಲೂರು, ಪ್ರಭಾಕರ ಬಡಿಗೇರ, ಬಿ.ಕೆ.ಹಿರೇಮಠ ವಕೀಲರು ಹುಲಗಿ, ಈಶ್ವರ ಲಿಂಗಾಪುರ, ಸಿ.ಎಂ.ಡಂಬಳ, ಅಬ್ದುಲ್ ಅಜೀಜ್ ಮಾನ್ವಿಕರ್, ಎಂ.ಡಿ.ಆಸೀಫ್ ಕರ್ಕಿಹಳ್ಳಿ, ಮಾರುತಿ ಮಾಗಳದ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಚುನಾವಣೆ ಸವಾಲಾಗಿ ಸ್ವೀಕರಿಸುವೆ : ಸಯ್ಯದ್ 


ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರು ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡುತ್ತ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಈ ಚುನಾವಣೆ ಸವಾಲಾಗಿ ಸ್ವೀಕರಿಸಲಾಗಿದ್ದು, ಚುನಾವಣೆ ಯುದ್ದವೀರರಿಗೆ ಹಬ್ಬವೇ ಹೊರತು ಭಯವಲ್ಲ ಎಂದ ಅವರು, ಸರ್ವರ ಸಹಕಾರದೊಂದಿಗೆ ಸ್ಪರ್ಧಿಸಿರುವ ಈ ಚುನಾವಣೆಯಲ್ಲಿ ಗೆಲ್ಲುವ ಧೃಢ ವಿಶ್ವಾಸವನ್ನು ವ್ಯಕ್ತಪಡಿಸಿದರು. 
ಮುಂದುವರೆದು ಮಾತನಾಡಿದ ಅವರು, ಕಳೆದ ೪-೫ ವರ್ಷಗಳಿಂದ ಕೊಪ್ಪಳ ನಗರ ಮತ್ತು ತಾಲೂಕಿನಲ್ಲಿ ಕೈಗೊಂಡಿರುವ ಜನಪರ ಕಾರ್ಯಕ್ರಮಗಳೇ ಈ ಚುನಾವಣೆಯಲ್ಲಿ ಗೆಲ್ಲಲು ಶ್ರೀರಕ್ಷೆಯಾಗಲಿದೆ. ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸಲಾಗಿ ಕ್ಷೇತ್ರದ ಜನರ ನಾಡಿ ಮೀಡಿತವನ್ನು ಅರಿತಿದ್ದೇನೆ. ಅವರು ನನಗೆ ನೀಡಿರುವ ಭರವಸೆ ಮತ್ತು ಬೆಂಬಲದಿಂದ ನನ್ನ ವಿಶ್ವಾಸ ಇಮ್ಮಡಿಗೊಂಡಿದೆ. ಎಲ್ಲೇಡೆ ಸಾರ್ವಜನಿಕ ಮತದಾರರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಇದು ಒಳ್ಳೆಯ ಬೆಳವಣಿಗೆ ಎಂದ ಅವರು, ನಮ್ಮ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೈಗೊಂಡಿದ್ದ ಹತ್ತು ಹಲವಾರು ಜನಪರ ಕಾರ್ಯಕ್ರಮಗಳು ಕೂಡ ಈ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಕೆ.ಎಂ.ಸಯ್ಯದ್ ಧೃಢ ವಿಶ್ವಾಸ ವ್ಯಕ್ತಪಡಿಸಿದರು.  

Saturday, April 13, 2013

ಸೇವೆಯಲ್ಲಿ ನಿರಂತರ ....ಜನರ ಸುಖ ದುಃಖದಲ್ಲಿ ಭಾಗಿಯಾಗಿ





ಸಾಮೂಹಿಕ ವಿವಾಹಗಳು




ಅಟೋ ಡ್ರೈವರ್ ಗಳಿಗಾಗಿ




ಉಚಿತ ನೀರು ಸರಬರಾಜು






ಬಡ ಮಹಿಳೆಯರಿಗೆ ಸೀರೆ ವಿತರಣೆ



ಸಯ್ಯದ್ ಜನಸೇವೆ ಕುರಿತು


ಕೊಪ್ಪಳದ ನೀರ್ ಸಾಬ

ಸಯ್ಯದ್ ಪೌಂಡೇಶನ್ ಮೂಲಕ ನಿರಂತರ ಜನಸೇವೆ


ರೈತರ ಸಾಲ ಮನ್ನಾ, ಪಂಪ್ ಸೆಟ್ ಗೆ ಉಚಿತ ವಿದ್ಯುತ್ – ಕೆಜೆಪಿ ಭರವಸೆ



ಸುಸ್ವಾಗತ


ಜೀವನ ಎನ್ನುವುದು ಅನುಭವಗಳ ಅಗಣಿತ ಗಣಿ. ಅದು ನಮ್ಮ ಮುಂದಿರಿಸುವ ಸವಾಲುಗಳನ್ನು ಸ್ವೀಕರಿಸಿ, ಗುರಿಗಳತ್ತ ಮುನ್ನಡೆಯುವುದೇ ನಮ್ಮ ಧ್ಯೇಯವಾಗಬೇಕು. ಗುರಿಗಳತ್ತ ಗಮನವಿದ್ದರೆ ದೇವನೆಂಬ ಸದ್ಗುರುವಿನ ಮಾರ್ಗದರ್ಶನ ಇದ್ದೇ ಇರುತ್ತದೆ ಎಂಬುದು ನನ್ನ ದೃಢ ನಂಬಿಕೆ.
ಕರ್ನಾಟಕದ ರಾಜಕೀಯದಲ್ಲಿ ನಾಲ್ಕು ದಶಕಗಳ ಹಿಂದೆ ನಾನು ಹೆಜ್ಜೆ ಇಡತೊಡಗಿದಾಗ ಒಂದು ದಿನ ನಾನು ರಾಜ್ಯದ ಮುಖ್ಯಮಂತ್ರಿ ಗದ್ದುಗೆಯತ್ತ ನಡೆಯುವೆನೆಂಬ ಕನಸು ಕಂಡಿರಲಿಲ್ಲ. ನನಗೆ ವಹಿಸಿದ ಕೆಲಸಗಳು ಮತ್ತು ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಮಾತ್ರ ನನ್ನ ಕಣ್ಣ ಮುಂದಿತ್ತು. ನನ್ನ ರಾಜಕೀಯ ಜೀವನದ ಉದ್ದಕ್ಕೂ ಜನರ ಹಿತಾಸಕ್ತಿಗಳ ರಕ್ಷಣೆಯೇ ನನ್ನ ಆದ್ಯತೆಯಾಗಿತ್ತು.
ಈಗ ನನ್ನ ಜೀವನ ಮತ್ತು ರಾಜಕೀಯ ಎರಡೂ ಕವಲು ದಾರಿಯಲ್ಲಿ ನಂತಿದೆ. ನಾನೊಂದು ಹೊಸ ನಿರ್ಧಾರ ಕೈಗೊಳ್ಳಲೇಬೇಕಾದ ಗಳಿಗೆ ಬಂದಿದೆ. ಆದರೆ ಮುಸುಕುವ ಮಬ್ಬಿನಲ್ಲಿ ಜನಹಿತ ರಕ್ಷಣೆಯ ಸಂಕಲ್ಪದ ಬೆಳಕು ನನ್ನ ಕೈಹಿಡಿದು ನಡೆಸಲಿದೆ ಎಂಬ ನಂಬಿಕೆ ನನಗಿದೆ.
ಕಳೆದ ಐದು ವರ್ಷಗಳಲ್ಲಿ ಏನೇನಾಯಿತು ಎನ್ನುವುದು ನಿಮಗೆ ತಿಳಿದೇ ಇದೆ. 2007 ರಲ್ಲಿ ನಾನು ಜಾತ್ಯತೀತ ಜನತಾದಳದ ನೆರವಿನೊಂದಿಗೆ ಸರ್ಕಾರ ರಚಿಸಿದಾಗ ಆ ಪಕ್ಷದ ಮಿತ್ರರಿಂದ ನನಗೆ ನಿಜಕ್ಕೂ ಅನ್ಯಾಯವಾಯಿತು. ಆದರೆ ರಾಜ್ಯದ ಮತದಾರರು ನನಗೆ ನ್ಯಾಯ ಒದಗಿಸಿ ಮುಖ್ಯಮಂತ್ರಿಯಾಗುವಂತೆ ಆಶೀರ್ವಾದ ಮಾಡಿದರು. ವಿಂಧ್ಯ ಪರ್ವತದ ಈಚೆ ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಪ್ರಥಮ ಬಾರಿಗೆ ಸರ್ಕಾರ ರಚಿಸಿತು. ಅದೊಂದು ಐತಿಹಾಸಿಕ ಅವಕಾಶ ಎಂದು ಭಾವಿಸಿದ ನಾನು ಜನಹಿತದ ನನ್ನ ಕನಸುಗಳನ್ನು ಸಾಕಾರಗೊಳಿಸಲು ಕಾರ್ಯ ಪ್ರವೃತ್ತನಾದೆ. ಸಮಾಜದ ಕಟ್ಟ ಕಡೆಯ ಮನುಷ್ಯರು, ಮಹಿಳೆಯರು, ಮಕ್ಕಳು ಅಭಿವೃದ್ಧಿಯಲ್ಲಿ ಪಾಲು ಪಡೆಯುವಂತಾಗಲು ವಿಶಿಷ್ಟ ಯೋಜನೆಗಳನ್ನು ರೂಪಿಸಿದೆ. ಬೈಸಿಕಲ್ ವಿತರಣೆ, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ ಬಾಂಡ್, ಹಜ್ ಭವನ ನಿರ್ಮಾಣ, ಹಾಲಿಗೆ ಸಹಾಯಧನ ಮುಂತಾದ ಯೋಜನೆಗಳು ಸಮಾಜದ ಆ ವರ್ಗಗಳನ್ನು ಸ್ಪರ್ಶಿಸುವ ಸಾಧನಗಳಾದುವು. ರೈತರಿಗೆ, ದುಡಿಯುವ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ಯೋಜನೆ ದೇಶದಲ್ಲೇ ಪ್ರಥಮ ಎನ್ನುವ ಮನ್ನಣೆ ಪಡೆಯಿತು. ಅನಪೇಕ್ಷಿತ ಸವಾಲುಗಳು ಇದ್ದೇ ಇದ್ದುವು; ಆದರೆ ಅವು ನನ್ನ ಕನಸುಗಳನ್ನು ಕಲಕಿ, ಕೊಂಕಿಸಲಿಲ್ಲ.
ಶರಣರು, ಹರಿದಾಸರು, ಸೂಫಿ ಸಂತರ ದಾರ್ಶನಿಕತೆ ಮತ್ತು ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ಜೆ.ಪಿ. ಅವರಂಥವರ ಚಿಂತನೆ ನನ್ನ ಬೆನ್ನ ಹಿಂದಿನ ಬೆಳಕಾಗಿ ಇರುವುದರಿಂದ ಕರ್ನಾಟಕವನ್ನು ಒಂದು ಮಾದರಿ ರಾಜ್ಯವಾಗಿ ರೂಪಿಸಬೇಕು ಎಂಬ ಮಹದಾಸೆ ನನ್ನದಾಗಿತ್ತು.
ಈಗ, ಹಳೆಯದೆಲ್ಲವ ಹಿಂದಿಕ್ಕಿ ಹೊಸ ಹೊಸ ಮನ್ವಂತರಕ್ಕೆ ಮುಖ ಮಾಡಿದ್ದೇನೆ. ‘ಕರ್ನಾಟಕ ಜನತಾ ಪಕ್ಷ’ ಜನಹಿತಕ್ಕೆ ಸಂಕೇತವಾಗಲಿದೆ. ಹೊಸಪಕ್ಷವನ್ನು ಪ್ರಾದೇಶಿಕ ಪಕ್ಷವೆಂದು ಕೆಲವರು ಕರೆದರೂ ಅದಕ್ಕೆ ರಾಷ್ಟ್ರೀಯ ದೃಷ್ಠಿಕೋನದ ಪ್ರಭಾವಳಿಯಿದೆ. ಜಾತ್ಯತೀತತೆ ಅದರ ಬೆನ್ನೆಲುಬಾಗಲಿದೆ.
ಬನ್ನಿ ನನ್ನೊಂದಿಗೆ ಕೈಜೋಡಿಸಿ… ಸಮೃದ್ಧ ಕರ್ನಾಟಕ ಕಟ್ಟುವ ಕಾರ್ಯದಲ್ಲಿ ಸಹಭಾಗಿಗಳಾಗಿ…

-ಇಂತಿ ತಮ್ಮ ವಿಶ್ವಾಸಿ
ಬಿ.ಎಸ್. ಯಡಿಯೂರಪ್ಪ